ಜಾರ್ಖಂಡ್ ಕ್ರಿಕೆಟ್ ಸಂಸ್ಥೆಗೆ ಬಾಕಿ ಹಣ ಪಾವತಿಸಿ ವಿವಾದಕ್ಕೆ ಕೊನೆ ಹಾಡಿದ ಧೋನಿ

ರಾಂಚಿ| Krishnaveni K| Last Modified ಬುಧವಾರ, 9 ಸೆಪ್ಟಂಬರ್ 2020 (10:20 IST)
ರಾಂಚಿ: ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಅಜೀವ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಶುಲ್ಕಕ್ಕೆ ಜಿಎಸ್ ಟಿ ಹಣ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿವಾದಕ್ಕೀಡಾಗಿದ್ದ ಧೋನಿ ಈಗ ಅದನ್ನು ಪರಿಹರಿಸಿದ್ದಾರೆ.
 

ಧೋನಿ ಶುಲ್ಕ ಪಾವತಿಸಿಲ್ಲ ಎಂಬ ವಿಚಾರ ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಸಭೆಯಲ್ಲಿ ಬೆಳಕಿಗೆ ಬಂದಿತ್ತು. ಈ ವಿಚಾರ ತಿಳಿಯುತ್ತಿದ್ದಂತೇ ಧೋನಿ ಅಭಿಮಾನಿಗಳು ಆಕ್ರೋಶಗೊಂಡು ಜಾರ್ಖಂಡ್ ಸಂಸ್ಥೆಗೆ ಅವರು ನೀಡಬೇಕಿದ್ದ 1800 ರೂ. ಹಣ ಪಾವತಿಸಲು ಮುಂದಾಗಿದ್ದರು. ಆದರೆ ಅದನ್ನು ಕ್ರಿಕೆಟ್ ಸಂಸ್ಥೆ ಸ್ವೀಕರಿಸಿರಲಿಲ್ಲ. ಇದೀಗ ಸ್ವತಃ ಧೋನಿಯೇ ಶುಲ್ಕ ಪಾವತಿಸುವ ಮೂಲಕ ವಿವಾದಕ್ಕೆ ಕೊನೆ ಹಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :