ಟಿ20 ಕ್ರಿಕೆಟ್ ಗೆ ನಿವೃತ್ತಿ: ಧೋನಿ ಹೇಳಿದ್ದೇನು?

ಮುಂಬೈ| Krishnaveni| Last Modified ಸೋಮವಾರ, 13 ನವೆಂಬರ್ 2017 (08:17 IST)
ಮುಂಬೈ: ಟಿ20 ಕ್ರಿಕೆಟ್ ಮಾದರಿಗೆ ಧೋನಿ ನಿವೃತ್ತಿ ಹೇಳಲಿ ಎಂದು ಅಭಿಪ್ರಾಯಗಳು ಕೇಳಿಬರುತ್ತಿರುವ ಬೆನ್ನಲ್ಲೇ ಸ್ವತಃ ಧೋನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
 
 ‘ಎಲ್ಲರಿಗೂ ಅವರವರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ’ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಧೋನಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
 
‘ಒಬ್ಬ ಮನುಷ್ಯ 70 ವರ್ಷ ಜೀವಿಸಬಹುದಾದರೆ, ಕ್ರಿಕೆಟ್ ಆಡುವುದು 10 ರಿಂದ 15 ವರ್ಷ. ಕೆಲವರು ಅಪರೂಪಕ್ಕೆ 20 ವರ್ಷ ಕ್ರಿಕೆಟ್ ಆಡುತ್ತಾರೆ. ಆ ಸಂದರ್ಭದಲ್ಲಿ ಮಾತ್ರ ನಿಮಗೆ ಹೆಮ್ಮೆಯಿಂದ ನಾನು ದೇಶವನ್ನು ಪ್ರತಿನಿಧಿಸುತ್ತೇನೆ ಎನ್ನಲು ಸಾಧ್ಯ. ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ ಎನ್ನುವುದೇ ನನಗೆ ದೊಡ್ಡ ಸ್ಪೂರ್ತಿ’ ಎಂದು ಧೋನಿ ಹೇಳಿದ್ದಾರೆ.
 
‘ನಾನು ಯಾವತ್ತೂ ಫಲಿತಾಂಶದ ಕಡೆಗೆ ಗಮನ ಹರಿಸುವುದಿಲ್ಲ. ನನ್ನ ಆಲೋಚನೆ ಮಟ್ಟ ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ಮಾತ್ರ ಯೋಚಿಸುತ್ತೇನೆ’ ಎಂದು ಧೋನಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :