ಚೆನ್ನೈ: ವಿಕೆಟ್ ಕೀಪರ್ ಧೋನಿ ಮಿಂಚಿನ ಗತಿಯಲ್ಲಿ ಬ್ಯಾಟ್ಸ್ ಮನ್ ರನ್ನು ಸ್ಟಂಪ್ ಔಟ್ ಮಾಡುವುದರಲ್ಲಿ ನಿಷ್ಣಾತ. ಹಾಗಿದ್ದರೂ ಧೋನಿಗೆ ಈ ಕಲೆ ಕರಗತವಾಗಿದ್ದು ಹೇಗೆ ಗೊತ್ತಾ?ಈ ಬಗ್ಗೆ ಧೋನಿಯೇ ಬಹಿರಂಗಪಡಿಸಿದ್ದಾರೆ. ತಾನು ಅಷ್ಟು ವೇಗವಾಗಿ ಕಣ್ಣು ಮುಚ್ಚಿ ಒಡೆಯುವುದರೊಳಗೆ ಸ್ಟಂಪ್ ಔಟ್ ಮಾಡುವುದು ಹೇಗೆ ಎಂಬುದನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದ ಬಳಿಕ ಧೋನಿ ಬಾಯ್ಬಿಟ್ಟಿದ್ದಾರೆ.ಬಹುಶಃ ನನಗೆ ಈ ಕಲೆ ಟೆನಿಸ್ ಬಾಲ್ ಕ್ರಿಕೆಟ್ ಆಡಿದ್ದರಿಂದ ಅಭ್ಯಾಸವಾಗಿದೆ.