ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದ ವೇಳೆ ಧೋನಿ ಕೈಕುಲುಕಲು ಅಭಿಮಾನಿಯೊಬ್ಬ ಮೈದಾನಕ್ಕೆ ಇಳಿದಿದ್ದು, ಈತನನ್ನು ಕಂಡು ಧೋನಿ ಕಾಲ್ಕಿತ್ತ ತಮಾಷೆಯ ಪ್ರಸಂಗ ನಡೆದಿದೆ.ಭಾರತ ಫೀಲ್ಡಿಂಗ್ ಗೆ ಮೈದಾನಕ್ಕಿಳಿದಾಗ ಅಭಿಮಾನಿಯೊಬ್ಬ ಧೋನಿಯ ಕೈಕುಲುಕಲು ಮೈದಾನಕ್ಕಿಳಿದಿದ್ದ. ಭಾರತೀಯ ಆಟಗಾರರ ನಡುವೆ ಇದ್ದ ಧೋನಿಯ ಕೈಕುಲುಕಲು ಬಂದಾಗ ಧೋನಿ ತಪ್ಪಿಸಿಕೊಂಡು ಅತ್ತಿತ್ತ ಓಡಿ ಆತನನ್ನು ಆಟ ಆಡಿಸಿದರು.ಪಕ್ಕದಲ್ಲಿದ್ದ ಆಟಗಾರರು ಧೋನಿಯ ಈ ತಮಾಷೆ ಕಂಡು ನಗುತ್ತಿದ್ದರೆ, ಕೊನೆಗೂ ಅಭಿಮಾನಿಯ