ದೋನಿ ಮಗಳ ವೀಡಿಯೋ ವೈರಲ್ (ವೀಡಿಯೋ ನೋಡಿ)

ಮುಂಬೈ| pavithra| Last Updated: ಶುಕ್ರವಾರ, 24 ನವೆಂಬರ್ 2017 (18:03 IST)
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ದೋನಿ ಅವರ ಮಗಳು ಝಿವಾ ಈಗ ಶೆಫ್ ಆಗಿದ್ದಾಳೆ. ಇದೇನಪ್ಪಾ ಇಷ್ಟು ಚಿಕ್ಕ ಹುಡುಗಿ ಶೆಫ್ ಆಗಿದ್ದಾಳಾ…? ಏನು ಅಡುಗೆ ಮಾಡುತ್ತಾಳೆ ಎಂದು ಯೋಚಿಸಬೇಡಿ.
ಝಿವಾ ತುಂಬಾ ಚೆನ್ನಾಗಿ ಗುಂಡಗಿನ ಚಪಾತಿ ಮಾಡುತ್ತಿರುವ ವೀಡಿಯೋ ತುಣುಕೊಂದು ಈಗ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ.


ಕ್ಯಾಪ್ಟನ್ ಕೂಲ್ ಎಂದೇ ಕರೆಸಿಕೊಂಡಿದ್ದ ದೋನಿ  ಮಗಳು ಈಗ ಅಪ್ಪನಿಗಿಂತ ಬ್ಯುಸಿ ಆಗಿಬಿಟ್ಟಿದ್ದಾಳೆ. ಇತ್ತೀಚೆಗಷ್ಟೇ ಮರಾಠಿ ಹಾಡೊಂದನ್ನು ಝಿವಾ ಹಾಡುತ್ತಿರುವ ವೀಡಿಯೋ ಒಂದು ಸಾಕಷ್ಟು ಜನರ ಮೆಚ್ಚುಗೆಯನ್ನು ಗಳಿಸಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಪುಟ್ಟ ಪೋರಿ ಈಗ ಚಪಾತಿ ಮಾಡುವುದಕ್ಕೆ ತಯಾರಾಗಿಬಿಟ್ಟಿದ್ದಾಳೆ.


ಝಿವಾ ತನ್ನ ಪುಟ್ಟ ಕೈಗಳಿಂದ ಲಟ್ಟಣಿಗೆ ಹಿಡಿದು ದುಂಡಾಕಾರದ ಚಪಾತಿ ಮಾಡುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಕಣ್ಮನ ಸೆಳೆಯುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :