ಈ ಬಾರಿಯ ಐಪಿಎಲ್ ನಲ್ಲಿ ಧೋನಿಯದ್ದೇ ಶೋ

ದುಬೈ| Krishnaveni K| Last Modified ಮಂಗಳವಾರ, 15 ಸೆಪ್ಟಂಬರ್ 2020 (11:07 IST)
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿರುವ ಧೋನಿ ವರ್ಷದ ಬಳಿಕ ಕ್ರಿಕೆಟ್ ಫೀಲ್ಡಿಗಿಳಿಯುತ್ತಿದ್ದಾರೆ. ಅವರ ಮೇಲೆ ಅಭಿಮಾನಿಗಳ ನಿರೀಕ್ಷೆ ಅಪಾರವಾಗಿದೆ. ಅದನ್ನೆಲ್ಲಾ ಪೂರ್ತಿ ಮಾಡುವ ಜವಾಬ್ಧಾರಿ ಅವರ ಮೇಲಿದೆ.

 
ಅತ್ತ ಚೆನ್ನೈ ಕೂಡಾ ರೈನಾ ವಿವಾದ, ಕೊರೋನಾ ಸಂಕಷ್ಟದಿಂದ ಕುಗ್ಗಿ ಹೋಗಿತ್ತು. ಇದರಿಂದ ಹೊರಬಂದು ಚೆನ್ನೈಗೆ ಕಿಕ್ ಕೊಡಲು ಸಾಧ‍್ಯವಿರುವ ಏಕೈಕ ಕ್ರಿಕೆಟಿಗ ಎಂದರೆ ಧೋನಿ. ಒಂದೇ ಒಂದು ಪರ್ಫಾರ್ಮೆನ್ಸ್ ಗಾಗಿ ಕಾಯುತ್ತಿರುವ ಧೋನಿ ಈ ಐಪಿಎಲ್ ನನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದು ಖಂಡಿತಾ. ಹೀಗಾಗಿ ಈ ಬಾರಿಯ ಐಪಿಎಲ್ ಧೋನಿಯ ಶೋ ಆಗಲಿದೆ ಎಂಬುದು ಅಭಿಮಾನಿಗಳ ಲೆಕ್ಕಾಚಾರ.
ಇದರಲ್ಲಿ ಇನ್ನಷ್ಟು ಓದಿ :