ತನ್ನದೇ ಫಾರ್ಮ್ ನ ಸ್ಟ್ರಾಬೆರಿ ಚಪ್ಪರಿಸಿದ ಧೋನಿ

ರಾಂಚಿ| Krishnaveni K| Last Modified ಶನಿವಾರ, 9 ಜನವರಿ 2021 (09:12 IST)
ರಾಂಚಿ: ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿಕ ಕ್ರಿಕೆಟಿಗ ಧೋನಿ ಸಂಪೂರ್ಣವಾಗಿ ತಮ್ಮ ಮೆಚ್ಚಿನ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಅಪರೂಪಕ್ಕೆ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ.

 
ಈ ವಿಡಿಯೋದಲ್ಲಿ ಧೋನಿ ತಮ್ಮ ಫಾರ್ಮ್ ನಲ್ಲಿ ಹಣ್ಣಾಗಿ ನಿಂತ ಸ್ಟ್ರಾಬೆರಿ ಬೆಳೆಯನ್ನು ಚಪ್ಪರಿಸುವ ದೃಶ್ಯವಿದೆ. ಜೊತೆಗೆ ‘ನಾನು ಫಾರ್ಮ್ ನಲ್ಲಿ ಹೀಗೇ ಸುತ್ತಾಡುತ್ತಿದ್ದರೆ, ಒಂದೇ ಒಂದು ಸ್ಟ್ರಾಬೆರಿಯೂ ಉಳಿಯದು’ ಎಂದು ಧೋನಿ ಹಾಸ್ಯ ಮಾಡಿಕೊಂಡಿದ್ದಾರೆ. ಧೋನಿ ತಮ್ಮ ಫಾರ್ಮ್ ನಲ್ಲಿ ಸಾವಯವ ಕೃಷಿ ಮಾಡುತ್ತಿದ್ದು, ಸದ್ಯದಲ್ಲೇ ದುಬೈಗೂ ರಫ್ತು ಮಾಡುವ ಯೋಜನೆ ಹೊಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :