ಜಮ್ಮು ಕಾಶ್ಮೀರ: ಭಾರತೀಯ ಕ್ರಿಕೆಟ್ ರಂಗದ ದಿಗ್ಗಜ ಕ್ರಿಕೆಟಿಗ ಧೋನಿ ಈಗ ಸೇನೆಯಲ್ಲಿ ಅಪ್ಪಟ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.ನಿನ್ನೆಯಿಂದ ಧೋನಿ ವಿಕ್ಟರ್ ಫೋರ್ಸ್ ನಲ್ಲಿ ಕಾವಲು, ಗಸ್ತು ತಿರುಗುವ ಕೆಲಸ ಮಾಡುತ್ತಿದ್ದಾರೆ. ಅದೂ ಅತೀ ಹೆಚ್ಚು ಉಗ್ರ ಪೀಡಿತ ಪ್ರದೇಶವಾಗಿರುವ ದಕ್ಷಿಣ ಕಾಶ್ಮೀರದಲ್ಲಿ ಎನ್ನುವುದು ವಿಶೇಷ!ಇಲ್ಲಿ ವಿಶೇಷ ಭದ್ರತೆಗಳಿಲ್ಲದೆ ಸಾಮಾನ್ಯ ಯೋಧನಂತೆ ಧೋನಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸೇನಾ ಮೂಲಗಳಿಂದ ತಿಳಿದುಬಂದಿದೆ. 15 ದಿನಗಳ ಕಾಲ