ತಿರುವನಂತಪುರಂ: ನ್ಯೂಜಿಲೆಂಡ್ ವಿರುದ್ಧ ಅಂತಿಮ ಟಿ20 ಪಂದ್ಯವನ್ನು ಟೀಂ ಇಂಡಿಯಾ ರೋಚಕವಾಗಿ ಗೆದ್ದಿತ್ತು. ಆದರೆ ಈ ಗೆಲುವಿಗೆ ಧೋನಿಯೇ ಕಾರಣ ಎನ್ನುವುದು ಬಹಿರಂಗವಾಗಿದೆ. ಕೊನೆಯ ಓವರ್ ನಲ್ಲಿ ಜಸ್ಪ್ರೀತ್ ಬುಮ್ರಾರನ್ನು ಕಣಕ್ಕಿಳಿಸಲು ಧೋನಿ ಮತ್ತು ರೋಹಿತ್ ಶರ್ಮಾ ಸಲಹೆ ನೀಡಿದ್ದರು. ಹೀಗಾಗಿಯೇ ಬುಮ್ರಾರನ್ನು ಕಣಕ್ಕಿಳಿಸಲಾಯಿತು. ಇದರಿಂದಾಗಿ ನಮ್ಮ ಗೆಲುವು ಸುಲಭವಾಯಿತು ಎಂದು ಕೊಹ್ಲಿ ಹೇಳಿದ್ದಾರೆ.ಒತ್ತಡದ ಸನ್ನಿವೇಶದಲ್ಲಿ ಧೋನಿ ಮತ್ತು ರೋಹಿತ್ ನನ್ನ ಬಳಿ ಬಂದು ಕೊನೆಯ ಎರಡು ಓವರ್