ಕೋಲ್ಕೊತ್ತಾ: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯ ಆಡಲು ಕೋಲ್ಕೊತ್ತಾಗೆ ಬಂದಿಳಿದ ಟೀಂ ಇಂಡಿಯಾ ಮಳೆಯ ಕಾಟದಿಂದ ಸರಿಯಾಗಿ ಅಭ್ಯಾಸ ನಡೆಸಲಾಗಲಿಲ್ಲ. ಹೀಗಾಗಿ ಕ್ರಿಕೆಟಿಗ ಧೋನಿ ಕೈಯಲ್ಲಿ ಗನ್ ಹಿಡಿದು ಕೈ ಚಳಕ ಪರೀಕ್ಷಿಸಿದರು.ಪತ್ನಿಯ ತವರೂರಿನಲ್ಲಿ ಧೋನಿಗೆ ಹೊತ್ತು ಕಳೆಯುವುದು ಕಷ್ಟವಾಗಲಿಲ್ಲ. ನೇರವಾಗಿ ಪೊಲೀಸ್ ತರಬೇತಿ ಕೇಂದ್ರಕ್ಕೆ ಭೇಟಿ ಕೊಟ್ಟ ಧೋನಿ ಕೆಲ ಹೊತ್ತು ಅಲ್ಲಿ ಕಾಲ ಕಳೆದರು. ಅಷ್ಟೇ ಅಲ್ಲ, ಗನ್ ಹಿಡಿದು ತಮ್ಮ ಗುರಿ ಎಷ್ಟು ನಿಖರವಾಗಿದೆ