ಚೆನ್ನೈ: ಐಪಿಎಲ್ ಗಾಗಿ ಕ್ರಿಕೆಟಿಗರು, ಫ್ರಾಂಚೈಸಿಗಳು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದೀಗ ಧೋನಿ ತಮ್ಮ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಚಾರಕ್ಕಾಗಿ ತಮ್ಮ ಜೀವನದ ಕತೆ ಹೇಳಲು ಹೊರಟಿದ್ದಾರೆ.ಹಾಟ್ ಸ್ಟಾರ್ ಆಪ್ ನ ಹೊಸ ವೆಬ್ ಸೀರೀಸ್ ನಲ್ಲಿ ಧೋನಿ ಕತೆ ಮೂಡಿಬರಲಿದೆ. ಇದರಲ್ಲಿ ಧೋನಿ ತಾವು ಬೆಳೆದು ಬಂದ ಹಾದಿಯನ್ನು ಬಿಚ್ಚಿಡಲಿದ್ದಾರೆ.ಇದೀಗ ವೆಬ್ ಸೀರೀಸ್ ನ ಟ್ರೈಲರ್ ಬಿಡುಗಡೆಯಾಗಿದ್ದು, ಧೋನಿ ತಮಿಳು ಭಾಷೆಯಲ್ಲಿ ತಮ್ಮ ಕತೆ ಹೇಳುವುದಾಗಿ ಹೇಳುತ್ತಾರೆ.