ರಾಂಚಿ: ವಿಶ್ವಕಪ್ ಬಳಿಕ ಧೋನಿಯನ್ನು ಕ್ರಿಕೆಟ್ ಮೈದಾನದಲ್ಲಿ ಅಭಿಮಾನಿಗಳು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮಹಿ ಯಾವಾಗ ಕ್ರಿಕೆಟ್ ಗೆ ಮರಳುತ್ತಾರೆ ಎಂಬುದೇ ಎಲ್ಲೆಡೆ ಕೇಳಿಬರುತ್ತಿರುವ ಪ್ರಶ್ನೆ.ಮೂಲಗಳ ಪ್ರಕಾರ ಧೋನಿ ಸದ್ಯದಲ್ಲೇ ಕ್ರಿಕೆಟ್ ಗೆ ಮರಳಲಿದ್ದಾರೆ. ಆದರೆ ಅದು ಟೀಂ ಇಂಡಿಯಾ ಜತೆಗಲ್ಲ! ಬದಲಾಗಿ ತಮ್ಮ ತವರು ಜಾರ್ಖಂಡ್ ನ ಅಂಡರ್ 23 ತಂಡದ ಜತೆಗೆ ಅಭ್ಯಾಸ ಮಾಡಲಿದ್ದಾರಂತೆ.ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಗಾಗಿ ಜಾರ್ಖಂಡ್ ತಂಡ ಸೂರತ್ ಗೆ ತೆರಳಲಿದೆ.