ಲೀಡ್ಸ್: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋತಿದ್ದಕ್ಕೆ ತಂಡದ ಮೇಲೆ ಅಭಿಮಾನಿಗಳು ಕಿಡಿ ಕಾರುತ್ತಿದ್ದರೆ, ಧೋನಿ ಕೂಡಾ ತಮ್ಮ ನಿಧಾನಗತಿಯ ಬ್ಯಾಟಿಂಗ್ ನಿಂದ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಾರೆ.ಈ ನಡುವೆ ಕೆಲವರು ಧೋನಿ ನಿವೃತ್ತಿಯಾಗಲಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಎರಡೂ ಏಕದಿನ ಪಂದ್ಯದಲ್ಲಿ ತೀರಾ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದ ಧೋನಿಯಲ್ಲಿ ಸಾಮರ್ಥ್ಯ ಕುಂದಿದೆಯೇ? ಮೈದಾನದಲ್ಲಿ ಭಾರತೀಯ ಪ್ರೇಕ್ಷಕರು ಮೂದಲಿಸಿದ್ದು ಧೋನಿಗೆ ಮುಜುಗರವುಂಟು ಮಾಡಿದೆಯೇ?ಇದೇ ಕಾರಣಕ್ಕೆ ಧೋನಿ ಸದ್ಯದಲ್ಲೇ ಕ್ರಿಕೆಟ್ ನಿಂದ ನಿವೃತ್ತಿಯಾಗಬಹುದು