ಬೆಂಗಳೂರು: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಮುಕ್ತಾಯವಾದ ಬಳಿಕ ಕಿರು ಅವಧಿಯ ವಿಶ್ರಾಂತಿಯಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಬೆಂಗಳೂರಿಗೆ ಬಂದಿದ್ದಾರೆ.ಇಲ್ಲಿ ನ್ಯಾಷನಲ್ ಕ್ರಿಕೆಟ್ ಅಕಾಡಮಿಯಲ್ಲಿ ಮತ್ತೆ ಅಭ್ಯಾಸ ಶುರುವಿಟ್ಟುಕೊಂಡಿದ್ದಾರೆ. ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ತಯಾರಾಗುತ್ತಿರುವ ಧೋನಿ 20 ಮೀ. ದೂರವನ್ನು 2 ಸೆಕೆಂಡುಗಳಲ್ಲಿ ಓಡಿದ್ದೇನೆ ಎಂದು ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಬರೆದುಕೊಂಡಿದ್ದಾರೆ.ಧೋನಿ ಜತೆಗೆ ಏಕದಿನ ತಂಡದ ಸದಸ್ಯರಾದ ಕೇದಾರ್ ಜಾದವ್, ಸುರೇಶ್ ರೈನಾ