ಚೆನ್ನೈ: ತವರು ಚೆನ್ನೈ ಮೈದಾನದಲ್ಲಿ ನಾಲ್ಕು ಗೆಲುವು ಸಾಧಿಸಿದ ಬಳಿಕವೂ ಸಿಎಸ್ ಕೆ ನಾಯಕ ಧೋನಿಗೆ ತವರಿನ ಪಿಚ್ ಮೇಲೆ ಅಸಮಾಧಾನ ಕಡಿಮೆಯಾಗಿಲ್ಲ.ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಉದ್ಘಾಟನಾ ಪಂದ್ಯದಿಂದಲೂ ಧೋನಿ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಚೆನ್ನೈ ಪಿಚ್ ನಿಧಾನಗತಿಯಿಂದ ಕೂಡಿದ್ದು, ಇಲ್ಲಿ ಚೆಂಡು ವಿಪರೀತ ತಿರುವು ಪಡೆಯುತ್ತಿದೆ. ಇದರಿಂದ ಬ್ಯಾಟ್ಸ್ ಮನ್ ಗಳಿಗೆ ರನ್ ಗಳಿಸುವುದು ಕಷ್ಟವಾಗುತ್ತಿದೆ.ಇದೇ ಕಾರಣಕ್ಕೆ ಧೋನಿ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.