ಮುಂಬೈ: ಎಲ್ಲಾ ಸರಿ ಹೋಗಿದ್ದರೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಕಳೆದ ವರ್ಷ ನಡೆಯಬೇಕಿದ್ದ ಟಿ20 ವಿಶ್ವಕಪ್ ಕೂಟದಲ್ಲಿ ಟೀಂ ಇಂಡಿಯಾ ಪರ ಆಡಬೇಕಿತ್ತು. ಆ ಕೂಟವಾಡಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವುಳಿಯುವ ಯೋಜನೆ ಹಾಕಿಕೊಂಡಿದ್ದರು.ಆದರೆ ಕೊರೋನಾದಿಂದಾಗಿ ಅವರ ಯೋಜನೆಗಳೆಲ್ಲಾ ತಲೆಕೆಳಗಾಗಿತ್ತು. 2019 ರಲ್ಲಿ ಏಕದಿನ ವಿಶ್ವಕಪ್ ನಲ್ಲಿ ಆಘಾತಕಾರಿಯಾಗಿ ಟೀಂ ಇಂಡಿಯಾ ಹೊರಬಿದ್ದ ಬಳಿಕ ಬಹಳ ದಿನಗಳ ಕಾಲ ಧೋನಿ ಕ್ರಿಕೆಟ್ ಆಡಿರಲಿಲ್ಲ. ಹಾಗಿದ್ದರೂ ಅವರು