ಪುತ್ರಿ ಜೀವಾ ಜತೆ ಜೀಪ್ ತೊಳೆದ ಧೋನಿ! ವಿಡಿಯೋ ಫುಲ್ ವೈರಲ್

ರಾಂಚಿ, ಶುಕ್ರವಾರ, 25 ಅಕ್ಟೋಬರ್ 2019 (09:20 IST)

ರಾಂಚಿ: ಕ್ರಿಕೆಟ್ ನಿಂದ ಬಿಡುವು ಪಡೆದಿರುವ ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ಈಗ ಏನು ಮಾಡುತ್ತಿದ್ದಾರೆ? ಅದಕ್ಕೆ ಉತ್ತರ ಸಿಕ್ಕಿದೆ ನೋಡಿ!


 
ಧೋನಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪುತ್ರಿ ಜೀವಾ ಜತೆಗೆ ತಮ್ಮ ನೆಚ್ಚಿನ ಜೀಪ್ ನ್ನು ತೊಳೆಯುವ ದೃಶ್ಯದ ವಿಡಿಯೋ ಪ್ರಕಟಿಸಿದ್ದು, ದೊಡ್ಡ ವಸ್ತುವನ್ನು ಶುಚಿಗೊಳಿಸುವ ಪುಟ್ಟ ಕೈಗಳ ಸಹಾಯವಿದ್ದರೆ ಚೆನ್ನಾಗಿರುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
 
ಧೋನಿ ಸರಳತೆಯನ್ನು ಹೆಚ್ಚಿನವರು ಕೊಂಡಾಡಿದ್ದಾರೆ. ಮತ್ತೆ ಕೆಲವರು ತಂದೆ ತಕ್ಕ ಮಗಳು ಎಂದು ಮೆಚ್ಚಿದ್ದಾರೆ. ಇನ್ನು ಕೆಲವರು ಇದೆಲ್ಲಾ ಬಿಡಿ, ಮೈದಾನಕ್ಕೆ ವಾಪಸಾಗುವುದು ಯಾವಾಗ ಹೇಳಿ ಎಂದು ಪ್ರಶ್ನಿಸಿದ್ದಾರೆ. ಅಂತೂ ಧೋನಿ ಅಭಿಮಾನಿಗಳಿಗೆ ಈ ವಿಡಿಯೋ ಭಾರೀ ಇಷ್ಟವಾದಂತಿದೆ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಜಯ್ ಹಜಾರೆ ಟ್ರೋಫಿ ಫೈನಲ್: ಕರ್ನಾಟಕಕ್ಕೆ ಸಿಗುತ್ತಾ ಚಾಂಪಿಯನ್ ಪಟ್ಟ?

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಕರ್ನಾಟಕ ತಂಡ ಫೈನಲ್ ಪ್ರವೇಶಿಸಿದ್ದು, ...

news

ಬಾಂಗ್ಲಾದೇಶ ಸರಣಿಗೆ ಟೀಂ ಇಂಡಿಯಾಗೆ ಹೊಸ ನಾಯಕ

ಮುಂಬೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಮುಂದಿನ ತಿಂಗಳು ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ...

news

ಭಾರತ-ಬಾಂಗ್ಲಾದೇಶ ಕ್ರಿಕೆಟ್ ಸರಣಿಗೆ ಇದ್ದ ಅಡೆತಡೆ ದೂರ

ಮುಂಬೈ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಿರುದ್ಧ ಕ್ರಿಕೆಟಿಗರು ಪ್ರತಿಭಟನೆ ನಡೆಸುತ್ತಿದ್ದರಿಂದ ಭಾರತ ...

news

ಕುಂಬ್ಳೆ-ಕೊಹ್ಲಿ ಕಲಹಕ್ಕೆ ಮಧ್ಯಸ್ಥಿಕೆ ವಹಿಸಿದ್ದರಂತೆ ಗಂಗೂಲಿ, ಸಚಿನ್

ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ನಡುವೆ ...