ಚೆನ್ನೈ: ಮುಂದಿನ ಐಪಿಎಲ್ ಆವೃತ್ತಿಗೆ ಕಣಕ್ಕೆ ಮರಳುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಲೇ ಭಾರೀ ತಯಾರಿ ನಡೆಸುತ್ತಿದೆ. ಅಭಿಮಾನಿಗಳು ಚೆನ್ನೈ ತಂಡದ ಜೆರ್ಸಿ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ತಂಡಕ್ಕೆ ಸ್ವಾಗತ ಕೋರುತ್ತಿದ್ದಾರೆ.ಆದರೆ ಸಿಎಸ್ ಕೆ ತಂಡದ ಯಶಸ್ವಿ ನಾಯಕನಾಗಿದ್ದಾಗ ಧೋನಿ ತಮ್ಮ ಹಳೆಯ ತಂಡವನ್ನು ಸ್ವಾಗತಿಸಿದ ಪರಿಯೇ ಬೇರೆ. ಹಳದಿ ಬಣ್ಣದ ಜೆರ್ಸಿ ತೊಟ್ಟುಕೊಂಡು ನಂ.7 ಸಂಖ್ಯೆ ಹಾಗೂ ಕೆಳಗೆ ತಲಾ ಎಂದು ತಮಿಳು ಶಬ್ಧವನ್ನು ಬರೆದುಕೊಂಡು ತಮ್ಮ