ವೃದ್ಧ ಮಹಿಳೆಯ ಮನದಾಸೆ ಪೂರೈಸಿದ ಧೋನಿ

ಮುಂಬೈ| Krishnaveni K| Last Modified ಶುಕ್ರವಾರ, 5 ಏಪ್ರಿಲ್ 2019 (09:36 IST)
ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ತಮಗಾಗಿ ಬಂದ ಅಭಿಮಾನಿಯ ಮನದಾಸೆ ಪೂರೈಸಿದ್ದಾರೆ.
 
ಚೆನ್ನೈ ಮತ್ತು ಮುಂಬೈ ನಡುವಿನ ಪಂದ್ಯ ವೀಕ್ಷಿಸಲು ಬಂದಿದ್ದ ವೃದ್ಧ ಮಹಿಳೆಯೊಬ್ಬರು ‘ನಾನು ಇಲ್ಲಿಗೆ ಧೋನಿಗಾಗಿಯೇ ಬಂದಿದ್ದೇನೆ’ ಎಂದು ಬಿತ್ತಿಫಲಕ ಹಿಡಿದಿದ್ದರು.
 
ಪಂದ್ಯದ ಬಳಿಕ ಧೋನಿ ಈ ಅಜ್ಜಿಯ ಮನದಾಸೆ ಪೂರೈಸಲು ನೇರವಾಗಿ ಗ್ಯಾಲರಿ ಕಡೆಗೆ ಇಳಿದುಬಂದಿದ್ದು, ಅಜ್ಜಿ ಜತೆ ಉಭಯ ಕುಶಲೋಪರಿ ನಡೆಸಿದರಲ್ಲದೆ, ಫೋಟೋಗೆ ಪೋಸ್ ಕೊಟ್ಟು ಆಸೆ ಪೂರೈಸಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :