ಇಂಗ್ಲೆಂಡ್ ಪ್ರವಾಸದಲ್ಲಿ ಕೆಎಲ್ ರಾಹುಲ್ ಜೊತೆಗೆ ಗರ್ಲ್ ಫ್ರೆಂಡ್ ಅಥಿಯಾ ಸಾಥ್

ಮುಂಬೈ| Krishnaveni K| Last Modified ಬುಧವಾರ, 9 ಜೂನ್ 2021 (09:44 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್, ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಗುಮಾನಿ ಇದೆ. ಇದಕ್ಕೆ ಪುಷ್ಠಿ ನೀಡುವಂತೆ ಈಗ ಫೋಟೋವೊಂದನ್ನು ಅಥಿಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

 
ಇಬ್ಬರೂ ಪರಸ್ಪರ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪ್ರಕಟಿಸುವುದು, ಕಾಮೆಂಟ್ ಮಾಡುವುದು ಇದ್ದೇ ಇದೆ. ಅಷ್ಟೇ ಅಲ್ಲ, ರಾಹುಲ್ ಸ್ನೇಹಿತರ ಬಳಗದಲ್ಲಿ ಅಥಿಯಾ ಸದಾ ಹಾಜರಿರುತ್ತಾರೆ. ಇದನ್ನು ನೋಡಿ ಇಬ್ಬರ ನಡುವೆ ಪ್ರೀತಿಯಿದೆ ಎನ್ನುವುದು ಅಭಿಮಾನಿಗಳ ಬಲವಾದ ಅನುಮಾನ.
 
ಇದೀಗ ರಾಹುಲ್ ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ಸರಣಿ ಆಡಲು ಸೌಥಾಂಪ್ಟನ್ ನಲ್ಲಿದ್ದಾರೆ. ಅವರ ಜೊತೆಗೆ ಅಥಿಯಾ ಕೂಡಾ ಇದ್ದಾರೆ ಎಂಬುದಕ್ಕೆ ನೆಟ್ಟಿಗರಿಗೆ ಸಾಕ್ಷಿಯೊಂದು ಸಿಕ್ಕಿದೆ. ಅಥಿಯಾ ಕೂಡಾ ಸೌಥಾಂಪ್ಟನ್ ನಲ್ಲಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಇದನ್ನು ಗಮನಿಸಿರುವ ನೆಟ್ಟಿಗರು ನೀವೂ ರಾಹುಲ್ ಜೊತೆ ಇಂಗ್ಲೆಂಡ್ ನಲ್ಲಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದರ ಜೊತೆಗೆ ಇಬ್ಬರೂ ಒಟ್ಟಾಗಿ ಇಂಗ್ಲೆಂಡ್ ಪ್ರವಾಸ ಮಾಡಿದ್ದಾರೆ ಎಂಬುದು ಅಭಿಮಾನಿಗಳಿಗೆ ಖಚಿತವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :