ಮುಂಬೈ: ಐಪಿಎಲ್ ನಲ್ಲಿ, ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ರನ್ ಗಳಿಸಿದರೂ ಟೀಂ ಇಂಡಿಯಾಕ್ಕೆ ಯುವ ಆಟಗಾರ ಸೂರ್ಯಕುಮಾರ್ ಯಾದವ್ ಆಯ್ಕೆಯಾಗದ ಬಗ್ಗೆ ಹಿರಿಯ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. Photo Credit: PTI ಸೂರ್ಯಕುಮಾರ್ ಗೆ ಅನ್ಯಾಯವಾಗಿದೆ. ಈ ಯುವ ಕ್ರಿಕೆಟಿಗನನ್ನು ಆಯ್ಕೆ ಮಾಡದೇ ಇರುವುದು ಯಾಕೆ ಎಂಬ ಬಗ್ಗೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ತನಿಖೆ ಮಾಡಲಿ ಎಂದು ವೆಂಗ್ಸರ್ಕಾರ್ ಆಗ್ರಹಿಸಿದ್ದಾರೆ. ಅವರು ಸರಾಗವಾಗಿ ರನ್ ಗಳಿಸಿದ್ದಾರೆ.