ಮುಂಬೈ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಆಯ್ಕೆ ನಡೆದಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಅನುಭವಿ ಗಂಭೀರ್, ಉತ್ಸಾಹಿ ರಿಷಬ್ ಪಂತ್ ಗೆ ಕೈಕೊಟ್ಟಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅದೀಗ ಹೆಚ್ಚಾಗಿದೆ. ಕನ್ನಡಿಗ ಮನೀಶ್ ಪಾಂಡೆ ಗಾಯಗೊಂಡು ತೆರವಾದ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಗೆ ಸ್ಥಾನ ನೀಡಿದ್ದಕ್ಕೆ ಟ್ವಿಟರ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಐಪಿಎಲ್ ನಲ್ಲಿ ಅಷ್ಟೆಲ್ಲಾ ಯಶಸ್ಸು ಸಾಧಿಸಿರುವ ಗೌತಮ್ ಗಂಭೀರ್ ಅಥವಾ ರಿಷಬ್ ಪಂತ್ ರನ್ನು