ಮುಂಬೈ: ಐಪಿಎಲ್ ನಲ್ಲಿ ಆರ್ ಸಿಬಿ ಪರ ಆಡುವ ದಿನೇಶ್ ಕಾರ್ತಿಕ್ ಈಗ ಅಬ್ಬರಿಸಿ ತಾವೊಬ್ಬ ಉತ್ತಮ ಫಿನಿಶರ್ ಎಂದು ಸಾಬೀತುಪಡಿಸುತ್ತಿದ್ದಾರೆ.ಹೀಗಾಗಿ ಸಹಜವಾಗಿಯೇ ಅವರನ್ನು ಮುಂಬರುವ ಟಿ20 ವಿಶ್ವಕಪ್ ಆಡಲಿರುವ ಟೀಂ ಇಂಡಿಯಾಗೆ ಆಯ್ಕೆ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ.ದಿನೇಶ್ ಈಗ ಆಡುವ ಪರಿ ನೋಡಿದರೆ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ ತಂಡಕ್ಕೆ ಉತ್ತಮ ಫಿನಿಶರ್ ಆಗಿ ಕೊಡುಗೆ ನೀಡಬಲ್ಲರು. ಇದರಿಂದಾಗಿ ಏಳನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಸದೃಢವಾಗುತ್ತದೆ. ಜೊತೆಗೆ ಟೀಂ ಇಂಡಿಯಾದಲ್ಲಿ