21 ಮೇ 1997ರ ದಿನ ಕ್ರಿಕೆಟ್ ಜಗತ್ತು ಹೊಸದೊಂದು ದಾಖಲೆಯನ್ನು ಕಂಡಿತು. ಸರ್ ವಿವಿಯನ್ ರಿಚರ್ಡ್ಸ್ ಅವರು ಏಕದಿನ ಕ್ರಿಕೆಟ್ನಲ್ಲಿ ದಾಖಲಿಸಿದ್ದ ವೈಯಕ್ತಿಕ ದಾಖಲೆಯನ್ನು ಅಳಿಸಿ ಹಾಕಿದ ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್ಮನ್ ಸಯೀದ್ ಅನ್ವರ್ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ 194 ರನ್ ಸಿಡಿಸುವುದರೊಂದಿಗೆ ಹೊಸ ಇತಿಹಾಸವನ್ನು ನಿರ್ಮಿಸಿದ್ದರು.