Widgets Magazine

ವಿರಾಟ್ ಕೊಹ್ಲಿಯನ್ನು ಬಾಯಿಗೆ ಬಂದಂತೆ ಟೀಕಿಸುವ ಮೊದಲು ಸ್ವಲ್ಪ ತಾಳಿ!

ಮುಂಬೈ| Krishnaveni K| Last Modified ಬುಧವಾರ, 10 ಏಪ್ರಿಲ್ 2019 (07:23 IST)
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕರಾಗಿ ಐಪಿಎಲ್ ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದಕ್ಕೆ ನಾಯಕ ವಿರಾಟ್ ಕೊಹ್ಲಿಯನ್ನು ಹಿಗ್ಗಾಮುಗ್ಗಾ ಟೀಕಿಸಲಾಗುತ್ತಿದೆ. ಆದರೆ ಇದೇ ಕೊಹ್ಲಿ ಟೀಂ ಇಂಡಿಯಾದ ರನ್ ಮೆಷಿನ್ ಎನ್ನುವುದನ್ನು ಮರೆಯಬೇಡಿ ಎಂದು ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕಾರ್ ಹೇಳಿದ್ದಾರೆ.
 
ವಿರಾಟ್ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಬರೀ ಐಪಿಎಲ್ ಪ್ರದರ್ಶನ ನೋಡಿ ಅವರನ್ನು ಅಳೆಯಬೇಡಿ ಎಂದು ದಿಲೀಪ್ ಕೊಹ್ಲಿ ಪರ ಬ್ಯಾಟ್ ಮಾಡಿದ್ದಾರೆ.
 
‘ಕೊಹ್ಲಿ ಅದ್ಭುತ ಸರ್ವಕಾಲಿಕ ಬ್ಯಾಟ್ಸ್ ಮನ್. ಅವರ ಟೆಸ್ಟ್ ಮತ್ತು ಏಕದಿನ ದಾಖಲೆಗಳನ್ನು ನೋಡಿ. ನಾಯಕರಾಗಿ ಅವರು ಇನ್ನೂ ರೂಪುಗೊಳ್ಳುತ್ತಿದ್ದಾರೆ. ಒಂದು ವೇಳೆ ಅವರನ್ನು ಬೆಂಬಲಿಸುತ್ತಿದ್ದರೆ ಈಗಲೂ ಬೆಂಬಲಿಸಿ. ಐಪಿಎಲ್ ಪ್ರದರ್ಶನದಿಂದ ಅವರನ್ನು ಅಳೆಯಬೇಡಿ’ ಎಂದು ಕೊಹ್ಲಿಯನ್ನು ಬೆಂಬಲಿಸಿ ವೆಂಗ್ಸರ್ಕಾರ ಮಾತನಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :