ದುಬೈ: ಟಿ20 ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆಯುವ ತೀರ್ಮಾನ ಕೈಗೊಂಡಿರುವ ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವಾನ್ ಬ್ರಾವೋ ಫ್ರಾಂಚೈಸಿ ಕ್ರಿಕೆಟ್ ಆಡುವುದಾಗಿ ಹೇಳಿದ್ದಾರೆ.ಬ್ರಾವೋ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ. ಒಂದು ವೇಳೆ ಅವರು ಫ್ರಾಂಚೈಸಿ ಕ್ರಿಕೆಟ್ ನಿಂದಲೂ ನಿವೃತ್ತರಾದರೆ ಚೆನ್ನೈಗೆ ಬಹುದೊಡ್ಡ ನಷ್ಟವಾದೀತು ಎಂಬ ಆತಂಕ ಅಭಿಮಾನಿಗಳಲ್ಲಿತ್ತು. ಅದೀಗ ದೂರವಾಗಿದೆ.ಇನ್ನು ಕೆಲವು ವರ್ಷಗಳವರೆಗೆ ಫ್ರಾಂಚೈಸಿ ಕ್ರಿಕೆಟ್ ಆಡುವುದನ್ನು ಮುಂದುವರಿಸಲಿದ್ದೇನೆ.