ಈಡನ್ ಗಾರ್ಡನ್ ಸ್ಟ್ಯಾಂಡ್ ಗೆ ಮಾಜಿ ನಾಯಕ ಸೌರವ್ ಗಂಗೂಲಿ ಹೆಸರು

Kolkotta| Krishnaveni K| Last Modified ಶುಕ್ರವಾರ, 20 ಜನವರಿ 2017 (10:13 IST)
ಕೋಲ್ಕೊತ್ತಾ: ಟೀಂ ಇಂಡಿಯಾ ಮಾಜಿ ನಾಯಕ ದಾದ ಸೌರವ್ ಗಂಗೂಲಿ ಹೆಸರು ಇನ್ನು ಮುಂದೆ ಕೋಲ್ಕೊತ್ತಾ ಈಡನ್ ಗಾರ್ಡನ್ ಮೈದಾನದಲ್ಲಿ ರಾರಾಜಿಸಲಿದೆ. ಗಂಗೂಲಿ ಹೆಸರನ್ನು ಒಂದು ಸ್ಟ್ಯಾಂಡ್ ಗೆ ಇಡಲಾಗುವುದು.

ಒಟ್ಟು ಆರು ಸ್ಟ್ಯಾಂಡ್ ಗಳ ಪೈಕಿ ಬೆಂಗಾಳ ಕ್ರಿಕೆಟ್ ಗೆ ಗಮನಾರ್ಹ ಪ್ರದರ್ಶನ ನೀಡಿದವರ ಹೆಸರನ್ನು ಇಡಲಾಗುತ್ತಿದೆ. ಇದರಲ್ಲಿ ಗಂಗುಲಿಯಲ್ಲದೆ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ, ಮಾಜಿ ಕ್ರಿಕೆಟಿಗ ಪಂಕಜ್ ರಾಯ್,

ಬಿಎನ್ ದತ್ತಾ, ಎಎನ್ ಘೋಷ್,

ಸ್ನೇಹಾಂಶು ಆಚಾರ್ಯ ಹೆಸರನ್ನು ಇರಿಸಲಾಗುಗತ್ತದೆ ಎಂದು ಕೋಲ್ಕೊತ್ತಾ ಕ್ರಿಕೆಟ್ ಸಂಸ್ಥೆ ಮೂಲಗಳು ತಿಳಿಸಿವೆ.

ಸದ್ಯಕ್ಕೆ ಕ್ರಿಕೆಟ್ ಮಂಡಳಿ ಅಧ್ಯಕ್ಷರೂ ಆಗಿರುವ ಗಂಗೂಲಿ ಕೋಲ್ಕೊತ್ತಾ ಪ್ರಿನ್ಸ್ ಎಂದೇ ಜನಪ್ರಿಯ. ಈ ರಾಜ್ಯದಿಂದ ಭಾರತ ಕ್ರಿಕೆಟ್ ತಂಡಕ್ಕೆ ಬಂದು ಗಮನಾರ್ಹ ಪ್ರದರ್ಶನ ನೀಡಿದವರಲ್ಲಿ ಇವರ ಹೆಸರು ಮುಂಚೂಣಿಯಲ್ಲಿದೆ. ಅದೇ ಕಾರಣಕ್ಕೆ ತವರು ರಾಜ್ಯದ ಕ್ರಿಕೆಟ್ ಹೆಸರನ್ನು ಉತ್ತುಂಗಕ್ಕೇರಿಸಿದ ಖ್ಯಾತನಾಮರ ಹೆಸರುಗಳನ್ನು ಕೋಲ್ಕೊತ್ತಾ ಮೈದಾನದಲ್ಲಿ ಶಾಶ್ವತವಾಗಿರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಬೇಕಾದ ಒಪ್ಪಿಗೆಯನ್ನೂ ಪಡೆದುಕೊಳ್ಳಲಾಗಿದೆ ಎಂದು ಕ್ರಿಕೆಟ್ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :