ಲಂಡನ್: ಪಾಕಿಸ್ತಾನ ವಿರುದ್ಧ ವಿಶ್ವಕಪ್ ಕ್ರಿಕೆಟ್ 2019 ರ ಲೀಗ್ ಪಂದ್ಯದಲ್ಲಿ ಸೋಲಿನ ಜತೆಗೆ ಇಬ್ಬರು ಕ್ರಿಕೆಟಿಗರಿಗೆ ಶಿಕ್ಷೆಯ ಬರೆ ಸಿಕ್ಕಿದೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಮತ್ತು ಜೇಸನ್ ರಾಯ್ ಅಸಭ್ಯ ಪದ ಬಳಸಿದ್ದಕ್ಕೆ ಇಬ್ಬರಿಗೂ ಪಂದ್ಯದ ಸಂಭಾವನೆಯಲ್ಲಿ ಶೇ.15 ರಷ್ಟು ಕಡಿತ ಮಾಡಲಾಗಿದೆ.ಆರ್ಚರ್ ಫೀಲ್ಡಿಂಗ್ ಮಾಡುತ್ತಿದ್ದಾಗ ಪ್ರೇಕ್ಷಕರತ್ತ ಅಸಭ್ಯ ಸನ್ನೆ ಮಾಡಿದ್ದರೆ, ಜೇಸನ್ ರಾಯ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಇನ್ನು,