ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹಿಂದೆ ಸರಿದಿರುವ ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಎರಡು ತಿಂಗಳು ಭಾರತೀಯ ಸೇನೆಯಲ್ಲಿ ತರಬೇತಿ ಪಡೆಯುವುದಾಗಿ ಪ್ರಕಟಿಸಿದ್ದರು.ಧೋನಿಯ ಈ ನಿರ್ಧಾರದ ಬಗ್ಗೆ ಅಭಿಮಾನಿಗಳು ಹೆಮ್ಮೆ ವ್ಯಕ್ತಪಡಿಸಿದ್ದರೆ, ಅತ್ತ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಡೇವಿಡ್ ಲಾಯ್ಡ್ ಅಣಕವಾಡುವ ಸ್ಮೈಲಿ ಪ್ರಕಟಿಸಿದ್ದಾರೆ. ಇದಕ್ಕೆ ಧೋನಿ ಅಭಿಮಾನಿಗಳು ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.ನಿಮಗೆ ಇದರಲ್ಲಿ ತಮಾಷೆ ಎನಿಸಿದ್ದು ಏನು? ಎಂದು ಕೆಲವರು ಪ್ರಶ್ನಿಸಿದರೆ ಧೋನಿಯ ಈ ಹೇಳಿಕೆ