Widgets Magazine

ಧೋನಿಯಷ್ಟು ಜಾಣ್ಮೆ ವಿರಾಟ್ ಕೊಹ್ಲಿಗೂ ಇಲ್ಲ!

ಮುಂಬೈ| Krishnaveni K| Last Modified ಶುಕ್ರವಾರ, 10 ಮೇ 2019 (07:19 IST)
ಮುಂಬೈ: ಕ್ರಿಕೆಟ್ ನಲ್ಲಿ ಜಾಣತನದ ವಿಚಾರಕ್ಕೆ ಬಂದರೆ ಧೋನಿಗಿರುವ ಜಾಣ್ಮೆ ವಿರಾಟ್ ಕೊಹ್ಲಿಗೂ ಇಲ್ಲ ಎಂದು ಧೋನಿ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜಿ ಹೇಳಿದ್ದಾರೆ.

 
ಎಂಎಸ್ ಧೋನಿ ಕ್ರಿಕೆಟ್ ಅಕಾಡೆಮಿ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ಕೇಶವ್ ಬ್ಯಾನರ್ಜಿ ಧೋನಿ ಕ್ಷಮತೆ, ಬುದ್ಧಿವಂತಿಕೆಯನ್ನು ಕೊಂಡಾಡಿದ್ದಾರೆ.
 
‘ಪಂದ್ಯದ ಗತಿ ತಿಳಿಯುವ ವಿಚಾರದಲ್ಲಿ ಧೋನಿಯಷ್ಟು ಜಾಣರು ಇನ್ಯಾರೂ ಇಲ್ಲ. ಆ ಜಾಣತನ ಕೊಹ್ಲಿಗೂ ಇಲ್ಲ. ಹೀಗಾಗಿ ಕೊಹ್ಲಿ ಯಾವತ್ತೂ ಸಲಹೆಗಾಗಿ ಧೋನಿಯ ಹಿಂದೆ ಬೀಳಬೇಕು. ಧೋನಿಯಿಲ್ಲದೇ ಹೋದರೆ ಭಾರತ ತಂಡದಲ್ಲಿ ಕೊಹ್ಲಿಗೆ ಸೂಕ್ತ ಸಲಹೆ ಕೊಡುವವರೇ ಇಲ್ಲ’ ಎಂದು ಕೇಶವ್ ಬ್ಯಾನರ್ಜಿ ಗುಣಗಾನ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :