ಭದ್ರತೆ ಲೋಪ: ಪಂದ್ಯದ ನಡುವೆ ಕೊಹ್ಲಿಯತ್ತ ನುಗ್ಗಿದ ಅಭಿಮಾನಿ

cricket team
ಅಹಮ್ಮದಾಬಾದ್| Krishnaveni K| Last Modified ಶುಕ್ರವಾರ, 26 ಫೆಬ್ರವರಿ 2021 (09:34 IST)
ಅಹಮ್ಮದಾಬಾದ್: ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ನಡುವೆ ಅಭಿಮಾನಿಯೊಬ್ಬ ಭದ್ರತೆ ಮುರಿದು ವಿರಾಟ್ ಕೊಹ್ಲಿಯತ್ತ ನುಗ್ಗಿದ ಘಟನೆ ನಡೆದಿದೆ.
 

ಒಂದು ವೇಳೆ ಅಭಿಮಾನಿ ಕೊಹ್ಲಿಯ ಬಳಿ ಬಂದಿದ್ದರೆ ಜೈವಿಕ ಸುರಕ್ಷಾ ವಲಯ ಮುರಿದಿದ್ದರಿಂದ ಕೊಹ್ಲಿ ಕ್ವಾರಂಟೈನ್ ಗೆ ಹೋಗಬೇಕಿತ್ತು. ಆದರೆ ಅಭಿಮಾನಿ ಬರುತ್ತಿರುವುದನ್ನು ದೂರದಿಂದಲೇ ಗಮನಿಸಿದ ಕೊಹ್ಲಿ ದೂರ ಹೋಗುವಂತೆ ಸನ್ನೆ ಮಾಡಿದರು. ಕೊಹ್ಲಿಯ ಮಾತಿಗೆ ಬೆಲೆಗೊಟ್ಟು ಆತ ಹಿಂದೆ ಸರಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಗುಜರಾತ್ ಕ್ರಿಕೆಟ್ ಸಂಸ್ಥೆ ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸಲಿದೆ.
ಇದರಲ್ಲಿ ಇನ್ನಷ್ಟು ಓದಿ :