ಗುವಾಹಟಿ ಪಿಚ್ ಮೇಲೆ ವಿರಾಟ್ ಕೊಹ್ಲಿ ರಂಗೋಲಿ ಹಾಕಿದ್ರಂತೆ!

ಗುವಾಹಟಿ| Krishnaveni K| Last Modified ಸೋಮವಾರ, 6 ಜನವರಿ 2020 (10:13 IST)
ಗುವಾಹಟಿ: ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯ ಮಳೆ ಮತ್ತು ಮೈದಾನದ ಅವ್ಯವಸ್ಥೆಯಿಂದಾಗಿ ರದ್ದಾದ ಬಳಿಕ ಅಭಿಮಾನಿಗಳ ಆಕ್ರೋಶ ಮೇರೆ ಮೀರಿದೆ. ಸಾಮಾಜಿಕ ಜಾಲತಾಣದಲ್ಲಿ ಮಳೆ ಸಂದರ್ಭದಲ್ಲಿ ಪಿಚ್ ಸರಿಯಾಗಿ ಕಾಪಾಡಿಕೊಳ್ಳದ ಕಾರಣಕ್ಕೆ ಅಭಿಮಾನಿಗಳು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ.

 
ಮಳೆಯಾಗುವಾಗ ಪಿಚ್ ಗೆ ಸರಿಯಾದ ಕವರ್ ಹಾಕದೇ ಮೈದಾನ ಸಂಪೂರ್ಣ ಒದ್ದೆಯಾಗಿತ್ತು. ಅದೂ ಸಾಲದೆಂಬಂತೆ ಮಳೆ ನಿಂತ ಮೇಲೆ ಪಿಚ್ ಒಣಗಿಸಲು ಇಸ್ತ್ರಿ ಬಾಕ್ಸ್, ವಾಕ್ಯೂಮ್ ಕ್ಲೀನರ್ ಬಳಸಿದ್ದು ಇನ್ನಷ್ಟು ಟೀಕೆಗೆ ಗುರಿಯಾಗಿತ್ತು. ಈ ನಡುವೆ ಒದ್ದೆ ಪಿಚ್ ನ್ನು ಕೈಯಿಂದ ಕುಟ್ಟಿ ವಿರಾಟ್ ಪರಿಶೀಲನೆ ಮಾಡಿದ್ದನ್ನೇ ಅಭಿಮಾನಿಗಳು ನಾನಾ ರೀತಿಯಲ್ಲಿ ಮೆಮೆ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.
 
ಒಬ್ಬರಂತೂ ವಿರಾಟ್ ಒದ್ದೆ ಪಿಚ್ ಮೇಲೆ ರಂಗೋಲಿ ಹಾಕುತ್ತಿರುವಂತೆ ಫೋಟೋ ಎಡಿಟ್ ಮಾಡಿ ಟ್ರೋಲ್ ಮಾಡಿದ್ದಾರೆ. ಮಾಜಿ ಕ್ರಿಕೆಟಿಗರು, ಕಾಮೆಂಟೇಟರ್ ಗಳೂ ಮೈದಾನದ ಅವ್ಯವಸ್ಥೆ ಬಗ್ಗೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದು, ಒಂದು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆ ಆಯೋಜಿಸುವಾಗ ಯಾವ ರೀತಿ ವ್ಯವಸ್ಥೆ ಮಾಡಬೇಕೆಂದು ಗೊತ್ತಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :