ನವದೆಹಲಿ: ಪ್ರತಿಭಾವಂತ ರಿಷಬ್ ಪಂತ್ ರನ್ನು ಆಡಿಸುತ್ತೇನೆಂದು ಆಸೆ ತೋರಿಸುತ್ತಾರೆಯೇ ವಿನಹ ಇನ್ನೂ ತಂಡದೊಳಕ್ಕೆ ಸೇರಿಸಿಕೊಳ್ಳುವ ಯೋಚನೆಯೇ ಮಾಡದ ವಿರಾಟ್ ಕೊಹ್ಲಿಗೆ ಅಭಿಮಾನಿಗಳು ಸರಿಯಾಗಿಯೇ ಜಾಡಿಸಿದ್ದಾರೆ.ಸದ್ಯಕ್ಕೆ ಕೋಚ್ ಇಲ್ಲದ ಟೀಂ ಇಂಡಿಯಾಕ್ಕೆ ಕೊಹ್ಲಿಯೇ ಬಾಸ್. ಹಾಗಾಗಿ ತಂಡದ ಸಂಪೂರ್ಣ ಹೊಣೆ ಅವರದ್ದು. ನಿನ್ನೆಯ ಪಂದ್ಯದಲ್ಲಿ ಸೋತ ಮೇಲಂತೂ ಅಭಿಮಾನಿಗಳ ಸಿಟ್ಟು ನೆತ್ತಿಗೇರಿದೆ. ನಿನ್ನೆ ಗೆದ್ದಿದ್ದರೆ ಸರಣಿ ಗೆಲ್ಲಬಹುದಾಗಿತ್ತು. ಆದರೆ ತೃತೀಯ ಪಂದ್ಯದಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಯಾವುದೇ ಬದಲಾವಣೆ