ಮುಂಬೈ: ಕೊನೆಗೂ ರಾಹುಲ್ ದ್ರಾವಿಡ್ ರನ್ನು ಟೀಂ ಇಂಡಿಯಾ ಕೋಚ್ ಆಗಿ ಕಾಣುವ ಯೋಗ ಅಭಿಮಾನಿಗಳದ್ದಾಗಿದೆ. ಲಂಕಾ ಪ್ರವಾಸ ಮಾಡಲಿರುವ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾಗೆ ದ್ರಾವಿಡ್ ಕೋಚ್ ಆಗಲಿದ್ದಾರೆ.ಈ ಬಗ್ಗೆ ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಸ್ಪಷ್ಟನೆ ನೀಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೇ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ.ಟೀಂ ಇಂಡಿಯಾಗೆ ಖಾಯಂ ಆಗಿ ದ್ರಾವಿಡ್ ಕೋಚ್ ಆಗಬೇಕೆಂಬುದು ಅಭಿಮಾನಿಗಳ