ಸಚಿನ್ ತೆಂಡುಲ್ಕರ್ ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು

ಮುಂಬೈ| Krishnaveni K| Last Modified ಗುರುವಾರ, 11 ಫೆಬ್ರವರಿ 2021 (09:42 IST)
ಮುಂಬೈ: ರೈತ ಪ್ರತಿಭಟನೆ ಬಗ್ಗೆ ವಿದೇಶೀಯರು ಟ್ವೀಟ್ ಮಾಡಿದ್ದನ್ನು ವಿರೋಧಿಸಿ ಟ್ವೀಟ್ ಮಾಡಿದ್ದಕ್ಕೆ ಪ್ರತಿಭಟನಾಕಾರರ, ಕಾಂಗ್ರೆಸ್ ಮತ್ತಿತರ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಗೆ ಅವರ ಅಭಿಮಾನಿಗಳು ಬೆಂಬಲ ನೀಡಿದ್ದಾರೆ.

 
ಸಚಿನ್ ಹೇಳಿಕೆ ಖಂಡಿಸಿ ಈ ಹಿಂದೆ ಕೇರಳ ಕಾಂಗ್ರೆಸ್ ಕಾರ್ಯಕರ್ತರು ಅವರ ಪ್ರತಿಕೃತಿಗೆ ಕಪ್ಪು ಆಯಿಲ್ ಸುರಿದು ಅವಮಾನ ಮಾಡಿದ್ದರು. ಕೆಲವರು ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಇದೆಲ್ಲದರ ಮಧ‍್ಯೆ ಇದೀಗ ನೂರಾರು ಜನ ಸಚಿನ್ ಅಭಿಮಾನಿಗಳು ಅವರ ಮುಂದೆ ಜಮಾಯಿಸಿದ್ದು, ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ಲೇ ಕಾರ್ಡ್ ಗಳನ್ನು ಹಿಡಿದು ‘ವಿ ಸಪೋರ್ಟ್ ಸಚಿನ್’ ಎಂದು ಕೂಗುತ್ತಾ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :