ಟೀಂ ಬಸ್ ಏರುತ್ತಿದ್ದ ಧೋನಿಗೆ ಪುಷ್ಪವೃಷ್ಟಿ ಮಾಡಿದ ಅಭಿಮಾನಿಗಳು

ದುಬೈ| Krishnaveni K| Last Modified ಶನಿವಾರ, 29 ಸೆಪ್ಟಂಬರ್ 2018 (07:57 IST)
ದುಬೈ: ಬಾಂಗ್ಲಾದೇಶ ವಿರುದ್ಧ ಏಷ್ಯಾ ಕಪ್ ಫೈನಲ್ ಆಡಲು ಹೋಟೆಲ್ ನಿಂದ ಬಸ್
ಏರುತ್ತಿದ್ದ ಟೀಂ ಇಂಡಿಯಾ ಆಟಗಾರರಿಗೆ ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತ ಕೊಟ್ಟಿದ್ದಾರೆ.ಟೀಂ ಇಂಡಿಯಾ ಆಟಗಾರರು ಹೋಟೆಲ್ ನಿಂದ ಬಸ್ ಏರುವ ಮೊದಲು ಭಾರತ ತಂಡದ ಅಧಿಕೃತ ಅಭಿಮಾನಿ ಸುಧೀರ್ ಕುಮಾರ್ ಶಂಖ ಮೊಳಗಿಸಿ ಸ್ವಾಗತಿಸಿದರು. ಇನ್ನು ಟೀಂ ಇಂಡಿಯಾ ಆಟಗಾರರನ್ನು ಕಣ್ತುಂಬಿಕೊಳ್ಳಲು ಹೋಟೆಲ್ ಹೊರಗೆ ಕಾಯುತ್ತಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡುತ್ತಲೇ ಹರ್ಷೋದ್ಘಾರ ಮೊಳಗಿಸಿದರು.


ಅದರಲ್ಲೂ ಧೋನಿ ಮತ್ತು ರೋಹಿತ್ ಶರ್ಮಾಗೆ ಅತೀ ಹೆಚ್ಚು ಜೈಕಾರ ಸಿಕ್ಕಿತು. ಅದದರಲ್ಲೂ ಧೋನಿ ಬಸ ಏರಲು ಹೊರಗೆ ಬರುತ್ತಿದ್ದ ಅಭಿಮಾನಿಗಳು ಗುಲಾಬಿ ಹೂಗಳನ್ನು ಚೆಲ್ಲಿ ಸ್ವಾಗತಿಸಿದರು. ಇದಕ್ಕೆ ಧೋನಿ ಕೂಡಾ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದರು. ಮುಗುಳ್ನಗುತ್ತಲೇ ಅಭಿಮಾನಿಗಳು ಎಸೆದ ಹೂಗಳನ್ನು ಕ್ಯಾಚ್ ಪಡೆದು ಅವರತ್ತ ತಿರುಗಾ ಚೆಲ್ಲಿ ತುಂಟ ನಗೆ ನಗುತ್ತಲೇ ಬಸ್ ಏರಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :