‘ರೈತ’ ಧೋನಿ ಯಾಕೆ ರೈತ ಪ್ರತಿಭಟನೆ ಬಗ್ಗೆ ಮಾತಾಡ್ತಿಲ್ಲ?

ನವದೆಹಲಿ| Krishnaveni K| Last Modified ಶುಕ್ರವಾರ, 5 ಫೆಬ್ರವರಿ 2021 (10:07 IST)
ನವದೆಹಲಿ: ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ರೈತ ಪ್ರತಿಭಟನೆ ಬಗ್ಗೆ ಭಾರತೀಯ ಕ್ರಿಕೆಟಿಗರು ತಮಗೆ ಅನಿಸಿದ್ದನ್ನು ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಆದರೆ ಧೋನಿ ಮಾತ್ರ ಹೇಳಿಕೆ ನೀಡಿಲ್ಲ. ಈ ಬಗ್ಗೆ ಟ್ವಿಟರಿಗರು ಧೋನಿಯನ್ನು ಪ್ರಶ್ನಿಸಿದ್ದಾರೆ.
 > ನಿವೃತ್ತಿ ಬಳಿಕ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಧೋನಿ ಪಕ್ಕಾ ರೈತನಾಗಿದ್ದಾರೆ. ಆದರೆ ರೈತ ಪ್ರತಿಭಟನೆ ಬಗ್ಗೆ ಸಚಿನ್, ವಿರಾಟ್, ರೋಹಿತ್ ಸೇರಿದಂತೆ ಎಲ್ಲಾ ಕ್ರಿಕೆಟಿಗರೂ ಟ್ವೀಟ್ ಮಾಡಿದ್ದರೂ ಧೋನಿ ಏನೂ ಮಾತಾಡಿಲ್ಲ ಎಂದು ಕೆಲವರು ಅವರ ದೇಶಭಕ್ತಿಯನ್ನೇ ಪ್ರಶ್ನೆ ಮಾಡಿದ್ದಾರೆ. ಆದರೆ ಪಕ್ಕಾ ಧೋನಿ ಅಭಿಮಾನಿಗಳು ಅವರನ್ನು ಸಮರ್ಥಿಸಿದ್ದು, ಧೋನಿಯ ದೇಶಭಕ್ತಿಯನ್ನು ಯಾರೂ ಪ್ರಶ್ನೆ ಮಾಡೋ ಹಾಗೇ ಇಲ್ಲ ಎಂದು ಮಿಲಿಟರಿ ಸಮವಸ್ತ್ರದಲ್ಲಿರುವ ಫೋಟೋ ಪ್ರಕಟಿಸಿ ತಿರುಗೇಟು ನೀಡಿದ್ದಾರೆ.>


ಇದರಲ್ಲಿ ಇನ್ನಷ್ಟು ಓದಿ :