Widgets Magazine

ಕೊನೆಗೂ ಫಾರ್ಮ್ ಗೆ ಬಂದ ಮಯಾಂಕ್ ಅಗರ್ವಾಲ್: ಕೊಹ್ಲಿ ತಲೆನೋವು ಮಾಯ

ಹ್ಯಾಮಿಲ್ಟನ್| Krishnaveni K| Last Modified ಶನಿವಾರ, 15 ಫೆಬ್ರವರಿ 2020 (11:55 IST)
ಹ್ಯಾಮಿಲ್ಟನ್: ನ್ಯೂಜಿಲೆಂಡ್ ಗೆ ಬಂದಾಗಿನಿಂದ ಮಂಕಾಗಿದ್ದ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಕೊನೆಗೂ ನ್ಯೂಜಿಲೆಂಡ್ ಇಲೆವೆನ್ ಎದುರಿನ ಅಭ್ಯಾಸ ಪಂದ್ಯದಲ್ಲಿ ಫಾರ್ಮ್ ಗೆ ಬಂದಿದ್ದಾರೆ.

 

ಮೂರು ಏಕದಿನ ಪಂದ್ಯಗಳಲ್ಲಿ ಆರಂಭಿಕರಾಗಿದ್ದ ಮಯಾಂಕ್ ಅಗರ್ವಾಲ್ ಕಳಪೆ ಮೊತ್ತಕ್ಕೆ ಔಟಾಗಿದ್ದರು. ಅಭ್ಯಾಸ ಪಂದ್ಯದ ಮೊದಲ ಇನಿಂಗ್ಸ್ ನಲ್ಲೂ ಕಳಪೆ ಫಾರ್ಮ್ ಮುಂದುವರಿಸಿದ್ದರು.
 
ಹೀಗಾಗಿ ರೋಹಿತ್ ಶರ್ಮಾಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆರಂಭಿಕರ ಫಾರ್ಮ್ ಚಿಂತೆಯ ವಿಷಯವಾಗಿತ್ತು. ಆದರೆ ಇದೀಗ ಮಯಾಂಕ್ ಮತ್ತು ಪೃಥ್ವಿ ಶಾ ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಆರಂಭ ನೀಡಿದ್ದಾರೆ. ಇಂದಿನ ದಿನದಂತ್ಯಕ್ಕೆ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 7 ಓವರ್ ಗಳ ಆಟವಾಡಿದ್ದು ವಿಕೆಟ್ ನಷ್ಟವಿಲ್ಲದೇ 59 ರನ್ ಗಳಿಸಿದ್ದಾರೆ. ಇದರೊಂದಿಗೆ 87 ರನ್ ಗಳ ಮುನ್ನಡೆಯನ್ನೂ ಸಾಧಿಸಿದೆ.
ಇದರಲ್ಲಿ ಇನ್ನಷ್ಟು ಓದಿ :