ಕೊಲೊಂಬೊ: ತ್ರಿಕೋನ್ ಟಿ 20 ಸರಣಿಯ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 17 ರನ್ ಗಳಿಂದ ಜಯಗಳಿಸಿದೆ. ಈ ಮೂಲಕ ಫೈನಲ್ಸ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ರೋಹಿತ್ ತಮ್ಮ ಎಂದಿನ ಫಾರ್ಮ್ ಪ್ರದರ್ಶಿಸಿದರು. ಇದರೊಂದಿಗೆ ಇದುವರೆಗೆ ಫಾರ್ಮ್ ಕಳೆದುಕೊಂಡು ಮಂಕಾಗಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಮರಳಿ ಲಯಕ್ಕೆ ಬಂದರು. ಒಟ್ಟಾರೆ ಅವರು 5 ಸಿಕ್ಸರ್ ಗಳ ಸಹಿತ 61 ಬಾಲ್ ಗಳಲ್ಲಿ 89 ರನ್ ಗಳಿಸಿದರು.