ಮುಂಬೈ: ದ.ಆಫ್ರಿಕಾಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಮತ್ತು ಮಗಳು ವಮಿಕಾ ಜೊತೆ ವಿಮಾನವೇರಿದ್ದರು.ವಿಮಾನವೇರುವ ಮುನ್ನ ಎಲ್ಲರ ಕಣ್ಣು ವಮಿಕಾ ಕೊಹ್ಲಿ ಮೇಲಿತ್ತು. ಕೊಹ್ಲಿ ದಂಪತಿ ಇದುವರೆಗೆ ತಮ್ಮ ಮಗಳ ಫೋಟೋ ರಿವೀಲ್ ಮಾಡಿಲ್ಲ. ಸ್ವತಃ ಕೊಹ್ಲಿಯೇ ಮೊನ್ನೆ ಮಾಧ್ಯಮಗಳ ಬಳಿ ಬಂದು ಮಗುವಿನ ಫೋಟೋ ತೆಗೀಬೇಡಿ ಎಂದು ಮನವಿ ಮಾಡಿದ್ದರು.ಹಾಗಿದ್ದರೂ ಅನುಷ್ಕಾ ತೆಕ್ಕೆಯಲ್ಲಿದ್ದ ಮಗುವಿನ ಮುಖ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೊಹ್ಲಿ