Widgets Magazine

ವಿಶ್ವಕಪ್ ತಂಡದಿಂದ ರಿಷಬ್ ಪಂತ್ ರನ್ನು ಹೊರಗಿಟ್ಟಿದ್ದೇಕೆ ಎಂದು ಕೊನೆಗೂ ಬಹಿರಂಗಪಡಿಸಿದ ವಿರಾಟ್ ಕೊಹ್ಲಿ

ಮುಂಬೈ| Krishnaveni K| Last Modified ಗುರುವಾರ, 16 ಮೇ 2019 (08:28 IST)
ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ತಂಡ ಆಯ್ಕೆ ಮಾಡಿದಾಗ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ರಿಷಬ್ ಪಂತ್. ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನನ್ನು ವಿಶ್ವಕಪ್ ತಂಡದಿಂದ ಹೊರಗಿಟ್ಟಿದ್ದಕ್ಕೆ ಹಲವರು ಟೀಕೆ ಮಾಡಿದ್ದರು.

 
ರಿಷಬ್ ಬದಲಿಗೆ ಹಿರಿಯ ದಿನೇಶ್ ಕಾರ್ತಿಕ್ ಗೆ ಸ್ಥಾನ ನೀಡಿದ್ದು ಹಲವರಿಗೆ ಇಷ್ಟವಾಗಿರಲಿಲ್ಲ. ಈ ಬಗ್ಗೆ ಇದೀಗ ಸ್ವತಃ ನಾಯಕ ವಿರಾಟ್ ಕೊಹ್ಲಿ ಕಾರಣ ಬಯಲು ಮಾಡಿದ್ದಾರೆ.
 
ದಿನೇಶ್ ಒತ್ತಡದ ಸಂದರ್ಭದಲ್ಲಿಯೂ ಶಾಂತವಾಗಿರುತ್ತಾರೆ ಮತ್ತು ಅವರಲ್ಲಿ ಅನುಭವವಿದೆ ಎನ್ನುವ ಕಾರಣಕ್ಕೆ ರಿಷಬ್ ಬದಲಿಗೆ ಅವರಿಗೆ ಸ್ಥಾನ ನೀಡಲಾಯಿತು. ಒಂದು ವೇಳೆ ಧೋನಿಗೆ ಏನಾದರೂ ಆಯಿತು ಎಂದರೆ ಆ ಸ್ಥಾನಕ್ಕೆ ದಿನೇಶ್ ರನ್ನು ಆಯ್ಕೆ ಮಾಡಬಹುದು. ಹಾಗಾಗಿಯೇ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಯಿತು ಎಂದು ಕೊಹ್ಲಿ ವಿವರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :