ಮುಂಬೈ: ಮದುವೆಯಾದ ಬಳಿಕ ಬ್ಯುಸಿ ಕ್ರಿಕೆಟ್ ವೇಳಾಪಟ್ಟಿಯಿಂದಾಗಿ ಪತ್ನಿ ಅನುಷ್ಕಾ ಶರ್ಮಾ ಜತೆಗೆ ಕಾಲ ಕಳೆಯಲು ಅವಕಾಶವೇ ಸಿಗದಿದ್ದ ಬೇಸರದಲ್ಲಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊನೆಗೂ ಮಡದಿಯ ತೋಳ್ತೆಕ್ಕೆಗೆ ಸೇರಿದ್ದಾರೆ.ದ.ಆಫ್ರಿಕಾ ಪ್ರವಾಸ ಮುಗಿಸಿ ಬಂದ ವಿರಾಟ್ ಗೆ ಅನುಷ್ಕಾ ಜತೆ ಇರಲಾಗಿರಲಿಲ್ಲ. ಅನುಷ್ಕಾ ಕೂಡಾ ತಮ್ಮ ಪರಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು.ಇದೀಗ ಇಬ್ಬರೂ ಒಂದಾಗಿದ್ದು, ಸ್ವತಃ ವಿರಾಟ್ ಏರ್ ಪೋರ್ಟ್ ಗೆ ಹೋಗಿ ಪತ್ನಿಯನ್ನು ಕರೆದುಕೊಂಡು ಬಂದಿದ್ದಾರೆ.