ನವದೆಹಲಿ: ಯಾರದ್ದೇ ವಿಶೇಷ ದಿನವಿರಲಿ, ದೇಶದಲ್ಲಿ ಯಾವುದೇ ಹೊಸ ಬೆಳವಣಿಗೆಗಳಾಗಲಿ, ವೀರೇಂದ್ರ ಸೆಹ್ವಾಗ್ ಟ್ವಿಟರ್ ನಲ್ಲೊಂದು ಅದ್ಭುತ ಟ್ವೀಟ್ ಮಾಡುತ್ತಾರೆ. ಆದರೆ ಧೋನಿ ನಾಯಕತ್ವ ತ್ಯಜಿಸಿದ ವಿಚಾರದಲ್ಲಿ ಇದುವರೆಗೆ ಮೌನವಾಗಿದ್ದ ವೀರೂ ಕೊನೆಗೂ ತುಟಿ ಬಿಚ್ಚಿದ್ದಾರೆ.ಧೋನಿ ಜನವರಿ ನಾಲ್ಕರಂದು ವಿದಾಯ ಹೇಳಿದರು. ನಾನು ಏಳನೇ ತಾರೀಖಿನವರೆಗೆ ಕಾದು ಅವರ ಮುಂದಿನ ವೃತ್ತಿ ಜೀವನಕ್ಕೆ ಶುಭ ಕೋರುತ್ತಿದ್ದೇನೆ. ಯಾಕೆಂದರೆ ಧೋನಿಗೆ ಏಳನೇ ಸಂಖ್ಯೆ ಅದೃಷ್ಟವಲ್ಲವೇ? ಹಾಗಾಗಿ ಅದೇ ದಿನ ಅವರಿಗೆ ವಿಶ್