ಇಸ್ಲಾಮಾಬಾದ್: ಮೊದಲು ಕಾಶ್ಮೀರವನ್ನು ನಮ್ಮದಾಗಿಸುತ್ತೇವೆ. ಬಳಿಕ ಇಡೀ ಭಾರತವನ್ನೇ ಆಕ್ರಮಿಸುತ್ತೇವೆ ಎಂದು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿರುವ ಹಳೆಯ ವಿಡಿಯೋವೊಂದು ಈಗ ವೈರಲ್ ಆಗಿದೆ.‘ಗಾಝ್ವಾ ಇ-ಹಿಂದ್’ ಎಂಬ ಧಾರ್ಮಿಕ ನೀತಿ ನಿಯಮಾವಳಿಗಳನ್ನು ಉಲ್ಲೇಖಿಸಿ ಶೊಯೇಬ್ ಇಂತಹದ್ದೊಂದು ಹೇಳಿಕೆ ನೀಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಗಾಝ್ವಾ ಇ-ಹಿಂದ್ ನಮ್ಮ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಿದೆ. ಮೊದಲು ಕಾಶ್ಮೀರವನ್ನು ವಶಪಡಿಸುತ್ತೇವೆ. ಬಳಿಕ ಗಾಝ್ವಾ ಇ-ಹಿಂದ್