ಧೋನಿ ಜತೆ ವಿರಾಟ್ ಕೊಹ್ಲಿ ಪ್ರತ್ಯೇಕವಾಗಿ ಮಾತುಕತೆ ನಡೆಸಬೇಕಂತೆ!

ಕೋಲ್ಕೊತ್ತಾ| Krishnaveni| Last Modified ಸೋಮವಾರ, 13 ನವೆಂಬರ್ 2017 (08:21 IST)
ಕೋಲ್ಕೊತ್ತಾ: ಟಿ20 ಕ್ರಿಕೆಟ್ ಮಾದರಿಗೆ ನಿವೃತ್ತಿ ಹೇಳಬೇಕೆಂದು ಧೋನಿ ಮೇಲೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ಅವರ ಪರ ವಿರೋಧ ಚರ್ಚೆಗೆ ಮಾಜಿ ನಾಯಕ ಸೌರವ್ ಗಂಗೂಲಿ ಕಾಲಿಟ್ಟಿದ್ದಾರೆ.
 
‘ಧೋನಿ ಟಿ20 ದಾಖಲೆಗಳು ಅಷ್ಟೊಂದು ಉತ್ತಮವಾಗಿಲ್ಲ. ಅವರ ಜತೆ ನಾಯಕ ಕೊಹ್ಲಿ ಮತ್ತು ತಂಡದ ಮ್ಯಾನೇಜ್ ಮೆಂಟ್ ಪ್ರತ್ಯೇಕವಾಗಿ ಮಾತನಾಡುವುದು ಒಳಿತು. ಧೋನಿ ಒಂದು ವೇಳೆ ಟಿ20 ಕ್ರಿಕೆಟ್ ಗೆ ಹೊಸ ಮನೋಸ್ಥಿತಿ ಅಳವಡಿಸಿಕೊಂಡರೆ ಬಹುಶಃ ಯಶಸ್ವಿಯಾಗಬಹುದು’ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
 
ಏಕದಿನ ಪಂದ್ಯದಲ್ಲಿ ಧೋನಿಯ ರೋಲ್ ಬದಲಾವಣೆಯಾಗಬಾರದು. ಆದರೆ ಟಿ20 ಕ್ರಿಕೆಟ್ ನಲ್ಲಿ ಅವರ ಆಟ ಬದಲಾಯಿಸಿಕೊಳ್ಳಬೇಕಾಗಿದೆ. ಹೇಗೆ ಎಂಬುದನ್ನು ಅವರು ತಂಡದ ಜತೆ ಚರ್ಚಿಸಿ ನಿರ್ಧರಿಸಬೇಕು ಎಂದು ಗಂಗೂಲಿ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :