ನವದೆಹಲಿ: ಒಂದೇ ರಾಜ್ಯದ ಕ್ರಿಕೆಟ್ ಪ್ರತಿಭೆಗಳಾದರೂ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಸಂಬಂಧ ಅಷ್ಟಕ್ಕಷ್ಟೇ. ಐಪಿಎಲ್ ಆಡುತ್ತಿದ್ದಾಗ ಹಿಂದೊಮ್ಮೆ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದ ಈ ಜೋಡಿ ಮೈದಾನದ ಹೊರಗೂ ಆ ಕಹಿಯನ್ನೇ ಮುಂದುವರಿಸುತ್ತಿದ್ದಾರೆ. ಅದರಲ್ಲೂ ಗಂಭೀರ್ ಅಂತೂ ಅವಕಾಶ ಸಿಕ್ಕಾಗಲೆಲ್ಲಾ ಕೊಹ್ಲಿ ಮೇಲೆ ಟೀಕಾಪ್ರಹಾರ ನಡೆಸುತ್ತಲೇ ಇರುತ್ತಾರೆ. ಇದೀಗ ಮತ್ತೆ ಕೊಹ್ಲಿ ನಾಯಕತ್ವದ ಬಗ್ಗೆ ಟೀಕೆ ಮಾಡಿರುವ ಗಂಭೀರ್ ನಾಯಕನಾಗಿ ಅವರ ಸಾಧನೆ ಏನೇನೂ ಇಲ್ಲ ಎಂದಿದ್ದಾರೆ.ಕೆಲವು ಆಟಗಾರರಿರುತ್ತಾರೆ.