Widgets Magazine

ಕ್ರಿಕೆಟಿಗ ಗೌತಮ್ ಗಂಭೀರ್ ಗೆ ತುಂಬಾ ಅಭದ್ರತೆ ಕಾಡುತ್ತಿತ್ತಂತೆ!

ನವದೆಹಲಿ| Krishnaveni K| Last Modified ಗುರುವಾರ, 2 ಮೇ 2019 (07:24 IST)
ನವದೆಹಲಿ: ಒಂದು ಕಾಲದಲ್ಲಿ ಟೀಂ ಇಂಡಿಯಾ ಆರಂಭಿಕರಾಗಿದ್ದ ಗೌತಮ್ ಗಂಭೀರ್ ತುಂಬಾ ಅಭದ್ರತೆ ಕಾಡುತ್ತಿತ್ತು ಎಂದು ಟೀಂ ಇಂಡಿಯಾದ ಮಾಜಿ ಮಾನಸಿಕ ತಜ್ಞ ಪ್ಯಾಡಿ ಆಪ್ಟನ್ ಅಭಿಪ್ರಾಯ ಪಟ್ಟಿದ್ದಾರೆ.

 
ಗೌತಮ್ ಗಂಭೀರ್ ಕನಿಷ್ಟ ಮೊತ್ತಕ್ಕೆ ಔಟಾದರೂ ಸಾಕಷ್ಟು ಕೊರಗುತ್ತಿದ್ದರು. ಶತಕ ಗಳಿಸಿದರೂ ಒತ್ತಡದಲ್ಲಿದ್ದಂತೆ ವರ್ತಿಸುತ್ತಿದ್ದರು. ಅವರಲ್ಲಿ ತುಂಬಾ ಅಭದ್ರತೆಯ ಭಾವವಿತ್ತು ಎಂದು ಪ್ಯಾಡಿ ಹೇಳಿದ್ದಾರೆ.
 
ಹಾಗಿದ್ದರೂ ಇದೆಲ್ಲಾ ಗಂಭೀರ್ ಬೆಳವಣಿಗೆಗೆ ಭಂಗ ತರಲಿಲ್ಲ ಎಂದಿದ್ದಾರೆ. ಪ್ಯಾಡಿ ಈ ವಿಚಾರವನ್ನು ಅವರ ಹೊಸ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗಂಭೀರ್ ಪ್ಯಾಡಿ ಒಬ್ಬ ಉತ್ತಮ ಮನುಷ್ಯ. ಅವರ ಹೇಳಿಕೆಯಿಂದ ನನಗೆ ನೋವಾಗಿಲ್ಲ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :