ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ಕ್ರಮ ಕೈಗೊಳ್ಳಲು ವಿಫಲವಾದ ಸಿಎಂ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರಕ್ಕೆ ಹಸಿರು ನ್ಯಾಯಾಧಿಕರಣ 25 ಕೋಟಿ ರೂ. ದಂಡ ವಿಧಿಸಿದ ಬೆನ್ನಲ್ಲೇ ಕ್ರಿಕೆಟಿಗ ಗೌತಮ್ ಗಂಭೀರ್ ಕಿಡಿ ಕಾರಿದ್ದಾರೆ.ತಮಗೆ ಅನಿಸಿದ್ದನ್ನು ರಾಜಕೀಯ ವಿಚಾರವಾದರೂ ನೇರವಾಗಿ ಪ್ರಶ್ನಿಸುವ ದೆಹಲಿ ಮೂಲದ ಕ್ರಿಕೆಟಿಗ ಗೌತಮ್ ಗಂಭೀರ್ ಇದೀಗ ಹಸಿರು ನ್ಯಾಯಾಧಿಕರಣ ವಿಧಿಸಿರುವ ದಂಡದ ಹಣವನ್ನು ಯಾರು ತೆರುತ್ತಾರೆ ಎಂದು ಸಿಎಂ ಕೇಜ್ರಿವಾಲ್ ಗೆ ಪ್ರಶ್ನಿಸಿದ್ದಾರೆ. ವಿಶೇಷವೆಂದರೆ