2011 ರ ವಿಶ್ವಕಪ್ ನಲ್ಲಿ ಶತಕ ವಂಚಿತನಾಗಲು ಧೋನಿ ಕಾರಣವಾಗಿದ್ದು ಹೇಗೆ ಎಂದು ವಿವರಿಸಿದ ಗೌತಮ್ ಗಂಭೀರ್

ನವದೆಹಲಿ, ಸೋಮವಾರ, 18 ನವೆಂಬರ್ 2019 (09:23 IST)

ನವದೆಹಲಿ: ಸದಾ ತಮ್ಮ ನೇರ ಮಾತಿನ ಮೂಲಕ ಸುದ್ದಿಯಾಗುವ ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್ ಗಂಭೀರ್ 2011 ರ ವಿಶ್ವಕಪ್ ನಲ್ಲಿ ತಾವು ಶತಕದ ಹೊಸ್ತಿಲಲ್ಲಿ ಎಡವಲು ಧೋನಿ ಕಾರಣವಾಗಿದ್ದು ಹೇಗೆ ಎಂದು ವಿವರಿಸಿದ್ದಾರೆ.
 


2011 ವಿಶ್ವಕಪ್ ಫೈನಲ್ ಗೆಲುವಿನ ರೂವಾರಿಯಾಗಿದ್ದ ಗಂಭೀರ್ ಆ ಪಂದ್ಯದಲ್ಲಿ 97 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದರು. 31 ಕ್ಕೆ 2 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್ ಗೆ ಬಂದಿದ್ದ ಗಂಭೀರ್ ತಮ್ಮ ಅಮೋಘ ಆಟದಿಂದ ತಂಡವನ್ನು ಐತಿಹಾಸಿಕ ಗೆಲುವಿನತ್ತ ಕರೆದೊಯ್ದಿದ್ದರು.
 
ಆ ಪಂದ್ಯದಲ್ಲಿ ತಾವು 97 ರನ್ ಗೆ ಔಟಾಗಿದ್ದು ಹೇಗೆ ಎಂಬುದನ್ನು ಗಂಭೀರ್ ವಿವರಿಸಿದ್ದಾರೆ. ’97 ರನ್ ಗಳವರೆಗೆ ನನ್ನ ಗಮನ ಕೇವಲ ಶ್ರೀಲಂಕಾ ಟಾರ್ಗೆಟ್ ಚೇಸ್ ಮಾಡುವುದಷ್ಟೇ ಆಗಿತ್ತು. ನನ್ನ ವೈಯಕ್ತಿಕ ರನ್ ಕಡೆಗೆ ಗಮನವನ್ನೇ ಕೊಟ್ಟಿರಲಿಲ್ಲ. ಆದರೆ 97 ರನ್ ಗಳಾಗಿದ್ದಾಗ ಇನ್ನೊಂದು ತುದಿಯಲ್ಲಿದ್ದ ಧೋನಿ ನನ್ನ ಬಳಿ ಬಂದು ಇನ್ನು ಮೂರು ರನ್ ಬೇಕು. ಅದನ್ನು ಪೂರ್ತಿ ಮಾಡಿ ಶತಕ ಬಾರಿಸು ಎಂದಿದ್ದರು. ಅಲ್ಲಿಂದ ಇದ್ದಕ್ಕಿದ್ದಂತೆ ನನ್ನ ಗಮನ ಶತಕದತ್ತ ಹರಿಯಿತು. ಇದರಿಂದ ಏಕಾಗ್ರತೆ ಕಳೆದುಕೊಂಡು ಔಟಾದೆ’ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೆಸ್ಟ್ ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಕ್ಕೆ ಟೀಂ ಇಂಡಿಯಾದಲ್ಲಿ ಮಯಾಂಕ್ ಅಗರ್ವಾಲ್ ಗೆ ಭರ್ಜರಿ ಬಡ್ತಿ?!

ಮುಂಬೈ: ಟೆಸ್ಟ್ ಕ್ರಿಕೆಟ್ ನಲ್ಲಿ ಅದ್ಭುತ ಫಾರ್ಮ್ ಪ್ರದರ್ಶಿಸಿ ಬೆನ್ನು ಬೆನ್ನಿಗೆ ಶತಕ, ದ್ವಿಶತಕ ...

news

‘ಗ್ರೇಟ್’ ವಿರಾಟ್ ಕೊಹ್ಲಿಗೆ ಕೋಲ್ಕೊತ್ತಾದಲ್ಲಿ ನಿರಾಸೆಯಾಗಲ್ಲ ಎಂದ ಸೌರವ್ ಗಂಗೂಲಿ

ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನವಂಬರ್ 22 ರಿಂದ ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ...

news

ಡೆಲ್ಲಿ ಬೀದಿಗಳಲ್ಲಿ ಗೌತಮ್ ಗಂಭೀರ್ ನಾಪತ್ತೆ ಪೋಸ್ಟರ್

ನವದೆಹಲಿ: ದೆಹಲಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ ಇದೀಗ ...

news

ನನಗೆ ಒಂದು ಚಾನ್ಸ್ ಕೊಡಿ, ನೀವು ಮುಟ್ಟಿಕೊಳ್ಳುವಂತೆ ತಿರುಗಿ ಕೊಡ್ತೀನಿ ಎಂದಿದ್ದರಂತೆ ಮಯಾಂಕ್ ಅಗರ್ವಾಲ್!

ಇಂಧೋರ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಕನ್ನಡಿಗ ...