Widgets Magazine

ರೋಹಿತ್, ಧೋನಿ ಇರುವುದಕ್ಕೆ ಕೊಹ್ಲಿ ಚೆನ್ನಾಗಿ ನಾಯಕತ್ವ ನಿಭಾಯಿಸುತ್ತಿದ್ದಾರೆ ಎಂದು ಟಾಂಗ್ ಕೊಟ್ಟ ಗಂಭೀರ್

ನವದೆಹಲಿ| Krishnaveni K| Last Modified ಶುಕ್ರವಾರ, 20 ಸೆಪ್ಟಂಬರ್ 2019 (09:27 IST)
ನವದೆಹಲಿ: ಗೌತಮ್ ಗಂಭೀರ್ ಮತ್ತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಮೇಲ್ನೋಟಕ್ಕೆ ಹೊಗಳುತ್ತಾ ಒಳಗೊಳಗೇ ಟಾಂಗ್ ಕೊಟ್ಟಿದ್ದಾರೆ.

 
ಹಿಂದೆ ಐಪಿಎಲ್ ನಲ್ಲಿ ಕೊಹ್ಲಿ ನಾಯಕತ್ವವನ್ನು ಟೀಕಿಸಿದ್ದ ಗಂಭೀರ್ ಈಗ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ, ಧೋನಿ ಇರುವುದಕ್ಕೇ ಕೊಹ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೆನ್ನಾಗಿ ನಾಯಕತ್ವ ನಿಭಾಯಿಸುತ್ತಿದ್ದಾರೆ ಎಂದಿದ್ದಾರೆ. ಈ ಮೂಲಕ ಹೊಗಳಿಕೆಯ ಜತೆಗೆ ಟಾಂಗ್ ಕೊಟ್ಟಿದ್ದಾರೆ.
 
‘ಕೊಹ್ಲಿ ಇನ್ನೂ ಸಾಕಷ್ಟು ದೂರ ಸಾಗಬೇಕಿದೆ. ಅವರಿಗೆ ರೋಹಿತ್, ಧೋನಿ ಸಾಥ್ ನೀಡುತ್ತಿರುವುದರಿಂದ  ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೆನ್ನಾಗಿ ನಾಯಕತ್ವ ನಿಭಾಯಿಸುತ್ತಿದ್ದಾರೆ. ಆದರೆ ಒಂದು ಫ್ರಾಂಚೈಸಿಯ ನೇತೃತ್ವ ವಹಿಸಿದಾಗ ಇಂತಹ ಆಟಗಾರರ ಬೆಂಬಲವಿಲ್ಲದೇ ನಾಯಕತ್ವ ನಿಭಾಯಿಸುವುದೇ ನಿಜಕ್ಕೂ ದೊಡ್ಡ ಸವಾಲು’ ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :